ಹೃದಯದ ಬಾಗಿಲ
ತಟ್ಟಿ ನೀ ಹೋದರೆ
ರಾಧೆಯ ಮನಸ್ಸು ಭಾರ
ಕಾಣದ ಕನಸನ್ನು
ಕೊಟ್ಟು ನೀ ಹೋದರೆ
ವಾಸ್ತವ ಬದುಕು ದೂರ
ಹುಡುಕುವ ಕಂಗಳು
ಕಾಣದೆ ಹೋದರೆ
ಕಣ್ಧಾರೆಯೇ ಸಾಗರ
ಕೇಳುವ ಕಿವಿಗಳು
ಆಲಿಸದೇ ಹೋದರೆ
ಕೊಳಲದನಿಯ ಸಾರ
ಪ್ರೀತಿಯ ಸ್ಫೂರ್ತಿ
ನೀ ಕಣ್ಮರೆಯಾದರೆ
ಮನದಾಳದಲ್ಲಿ ಅಂಧಕಾರ
ಮನ ಮೋಹಕ ಕೃಷ್ಣ
ನೀ ದೂರವಾದರೆ
ವಿಧಿಯಾಟ ಬಲು ಕ್ರೂರ
- ಬರಹಗಾರರ ಕಾಲ್ಪನಿಕ ಸಾಲುಗಳು
No comments:
Post a Comment