Sunday, June 26, 2022

ಕಂಬನಿ

ಕಂಬನಿ ಕಣ್ಣು ದಾಟಲಿ

ನೋವಿನ ಆಳ ನೀಗಲಿ

ಚಿಂತೆಯೆಂಬ ಸಂತೆಯಲಿ

ಮನಸ್ಸು ಹಗುರವಾಗಲಿ

ಮನವ ಕಾಡುವ ವ್ಯಥೆಗಳಿಗೆ

ಮೌನವಾದ ದುಃಖ ಕಥೆಗಳಿಗೆ

ಹೃದಯ ನೊಂದ ಕಹಿ ಗಳಿಗೆ

ಅಸಹಾಯಕತೆಯ ಮರು ಗಳಿಗೆ

ಕಂಬನಿ ಕಣ್ಣು ದಾಟಲಿ...............

ನೋವಲ್ಲೇ ನಗುವ ಕಲೆಯೊಂದಿದೆ

ಈ ಬಾಳ ನೌಕೆಯ ತೇಲಿಸುತ್ತಿದೆ

ನಗುವಲ್ಲೇ ಈ ಜಗವ ಗೆಲ್ಲುತ್ತಿರೆ

ಸೋಲಿಗೂ ಭಯದ ಮುನ್ಸೂಚನೆ

ಮೊಗದ ಚೆಲುವಿನ ಆ ಕಣಜಕೆ

ಮುಗುಳ್ನಗೆಯ ರತ್ನದ ಹೊಸ ಪೋಣಿಕೆ

ನಗುವ ಹಂಚುವ ಮಹತ್ಕಾರ್ಯಕೆ

ನೋವೇ ಶರಣಾಗಿ ಸೋತು ಹೋಗಿದೆ



Saturday, February 19, 2022

ಅಪ್ಪೆ - ತುಳು ಸಾಹಿತ್ಯ

ಅಪ್ಪೆನ ಮಡಿಲ್ 

ಮೋಕೆದ ಉಡಲ್ 

ಮಮತೆದ ಶಾಂತ ಕಡಲ್ 

ಒಂರ್ಬ ತಿಂಗೊಳ್ದ 

ಬೇನೆನ್ ಸಹಿಸೊಂದ್

ಅಮ್ಮ ಪನ್ಪಿ ಲೆಪ್ಪುಗ್ 

ಮೋಕೆಡ್ ಕಾತೊಂದ್

ಕಿನ್ನಿ ಬೆರಳ್ ಪತ್ ದ್

ಕೈತುತ್ತ್ ಕೊರುದ್ 

ಜೋಗುಳದ ಪೊರ್ಲು ಪದೊಳ್ 

ತೊಟ್ಟಿಲ್ದ ಬಾಲೆದ ನಲಿಕೆ 

ತೆರಿಯಂದೆ ಮೂಡುನ ತೆಲಿಕೆ 

ಬುಲ್ಪಾಟದ ಹಠೊನೀರ್ ತಡೆತೊನಿಯರ್ 

ಚಂದಮಾಮನ್ ತೂಪಾವುನ ಪೊರ್ಲು

ಪತ್ತೊಂದ್ ನುಪ್ಪುದ ಬಟ್ಟಲ್ 

ಮಂಗಟಾದ್ ಈರ್ ಉನ್ಪಾಯರ್ 

ಜೋಕೆಡ್ ತಾಂಕಿಯರೀರ್ 

ಬೆಗರ್ ಸೀಂಟ್ ದ್ ಬೆನ್ ದ್

ಅರೆ ಬಂಜಿಡ್ ಜೆತ್ತರೀರ್ 

ಬಾಲೆಗ್ ಬಂಜಿದಿಂಜ ಉನ್ಪಾದ್ 

ಅಪ್ಪೆನ ಋಣನಾವೆ ತೀರಾವರೆ? 


Monday, November 29, 2021

Quote - 1

 Life is nothing but bundle of experiences,

Analyse it in an Innovative way to be successful.

Wednesday, September 29, 2021

ಅಮೃತ ಸಿಂಚನ - 17

 ಹುಂಡಿಗೆ ಹಾಕಿದ ಹಣ

ಉಳ್ಳವರ ಹೊಟ್ಟೆ ಸೇರಿದರೆ,

ಹಸಿದ ಅನಾಥ ಕಂದಮ್ಮಗಳ ಹೊಟ್ಟೆಗೆ ಹಾಕಿದ ಅನ್ನ

ದೇವರ ಮಡಿಲು ಸೇರುವುದು



Sunday, March 28, 2021

ಅಮೃತ ಸಿಂಚನ - 16

ಕಾಲ ಚಕ್ರ ಸಾಗಿದಂತೆ

ಪರಿಸ್ಥಿತಿ ಬದಲಾಗುವುದು ನಂಬಿಕೆ ಇಡಿ

ಆಗ ನಮ್ಮನ್ನು ತುಳಿದವರು 

ನಮ್ಮ ಕಾಲ ಬಳಿ ಇರುತ್ತಾರೆ



Wednesday, September 23, 2020

ಅಮೃತ ಸಿಂಚನ - ಅಧ್ಯಾಯ 15

ಮಕ್ಕಳಿಗಾಗಿ ಹಣ ಆಸ್ತಿಯನ್ನು
ಕೂಡಿಡುವುದಕ್ಕಿಂತ
ಅವರನ್ನೇ ಆಸ್ತಿಯೆಂಬಂತೆ 
ಪ್ರೀತಿಸುವುದು ಉತ್ತಮ........
ಕೂಡಿಟ್ಟ ಆಸ್ತಿಯ ಹಿಂದೆ ಓಡದೆ
ವಾತ್ಸಲ್ಯದ ಆಸ್ತಿಯನ್ನು ಮರೆಯದೆ
ಸದಾ ಹೃದಯ ಶ್ರೀಮಂತರಾಗಿರುತ್ತಾರೆ.....

ಅಮೃತ ಸಿಂಚನ

ಸಂಗೀತ ಮತ್ತು ಬರವಣಿಗೆಗೆ
ಮನಸ್ಸಿನ ನೋವನ್ನು ಸಂತೈಸುವ ಶಕ್ತಿಯಿದೆ