ಕಂಬನಿ ಕಣ್ಣು ದಾಟಲಿ
ನೋವಿನ ಆಳ ನೀಗಲಿ
ಚಿಂತೆಯೆಂಬ ಸಂತೆಯಲಿ
ಮನಸ್ಸು ಹಗುರವಾಗಲಿ
ಮನವ ಕಾಡುವ ವ್ಯಥೆಗಳಿಗೆ
ಮೌನವಾದ ದುಃಖ ಕಥೆಗಳಿಗೆ
ಹೃದಯ ನೊಂದ ಕಹಿ ಗಳಿಗೆ
ಅಸಹಾಯಕತೆಯ ಮರು ಗಳಿಗೆ
ಕಂಬನಿ ಕಣ್ಣು ದಾಟಲಿ...............
ನೋವಲ್ಲೇ ನಗುವ ಕಲೆಯೊಂದಿದೆ
ಈ ಬಾಳ ನೌಕೆಯ ತೇಲಿಸುತ್ತಿದೆ
ನಗುವಲ್ಲೇ ಈ ಜಗವ ಗೆಲ್ಲುತ್ತಿರೆ
ಸೋಲಿಗೂ ಭಯದ ಮುನ್ಸೂಚನೆ
ಮೊಗದ ಚೆಲುವಿನ ಆ ಕಣಜಕೆ
ಮುಗುಳ್ನಗೆಯ ರತ್ನದ ಹೊಸ ಪೋಣಿಕೆ
ನಗುವ ಹಂಚುವ ಮಹತ್ಕಾರ್ಯಕೆ
ನೋವೇ ಶರಣಾಗಿ ಸೋತು ಹೋಗಿದೆ
No comments:
Post a Comment