Friday, March 27, 2020

ಭಾವಾಮೃತ ಬಿಂದು

ಭಾವದ ಈ ಸೆಲೆ
ಭಾವಾಂತರಂಗವ ಮೀಟಿದೆ
ಕನಸಿನ ಕಣ್ ರೆಪ್ಪೆಗೆ
ಕಣ್ಣ ಹನಿಯು ಮುತ್ತಿಕ್ಕಿದೆ

ಕಾಣದ ಕಡಲಿಗೆ
ಮನವೇಕೋ ಹಾತೊರೆದಿದೆ
ಗಗನದ ಬಿಳಿ ಚುಕ್ಕಿಗೆ
ಮನವಿಂದೇಕೋ ಮರುಳಾಗಿದೆ

ಸಾವಿರ ಕನಸುಗಳು
ಸ್ಮೃತಿ ಪಟಲವ ಮುತ್ತಿದೆ
ವಾಸ್ತವಕ್ಕೆ ಬರಲಿಂದು
ಗೊಂದಲವು ಹೆಡೆಬಿಚ್ಚಿದೆ

ಸಾಗಿ ಬರುವ ಹಾದಿ
ಸಾಗರೋಪಾದಿ
ಬಾಳ ಪಯಣವಿದು
ಎಂದು ಮುಗಿಯದ ಅಧ್ಯಾಯ

ಕಷ್ಟ ಸುಖದ ಈ ತೇರು
ಎಳೆಯಲೇಬೇಕು ನೀನೂ
ಒಬ್ಬಂಟಿಯಾದರೂನೂ
ಧೃತಿಗೆಡದಿರೂ ಎಂದೂ

ಮನವ ಕದವ ತಟ್ಟಿದೆ
ಬಗೆಹರಿಯದ ನೂರು ಪ್ರಶ್ನೆಗಳು
ಭಾವ ಸುಳಿಯ ಸೃಷ್ಟಿಸಿದೆ
ಮನದಾಳದ ಹುಸಿ ಬಯಕೆಗಳು

ಈ ಮನದ ಸುಪ್ತ ಬಂಧುವೇ
ನೀನೊಮ್ಮೆ ಬಳಿಗೆ ಬಂದು
ಈ ಬಾಳ ಅಮೃತ ಬಿಂದುವೇ
ನೀ ಬೆಳಗೂ ಮನವ ಇಂದು

ಬೆಳಗೂ ಮನವ ಇಂದು
ಓ ಭಾವಾಮೃತದ ಬಿಂದು
ಬೆಳಗೂ ಮನವ ಇಂದು
ಓ ಭಾವಾಮೃತದ ಬಿಂದೂsss

- In search of a very good friend hiding inside ourself that is the positive energy. That will give you the confidence to overcome all the obstacles in life.









No comments: