ನಗುವೇ ನನ್ನ ಮರೆಯದಿರು.
ಕಣ್ಣಂಚಲಿ ನೋವಿದ್ದರೂ
ತುಟಿಯಂಚಲಿ ನೀನಿರು
ಜಗವ ಗೆಲ್ಲುವ ಶಕ್ತಿ
ನಗುವಿನೊಳಗಿನ ಕಾಂತಿ
ನೋವ ಮರೆಸುವ ಯುಕ್ತಿ
ಮುಗುಳ್ನಗೆಯ ಪಂಕ್ತಿ
ದುಗುಡ ನನ್ನ ಕರೆಯದಿರು
ದುನ್ಮಾನ ಬಳಿಗೆ ಸುಳಿಯದಿರು
ಚಿಂತೆಯ ಸುಳಿವಿದ್ದರೂ
ತುಟಿಯಂಚಲಿ ನೀನಿರು
ಸುಪ್ತ ಮನಸ್ಸಿನ ಒಡಲು
ಸಪ್ತ ಸಾಗರದ ಕಡಲು
ಪ್ರೀತಿ ತುಂಬಿದ ಹೊನಲು
ಬಣ್ಣದಿ ನಗುವ ಕಾಮನಬಿಲ್ಲು
Pure smile is the way of expressing happiness of inner spirit. It has the power to console you and spreads happiness around you. Smile it is a free therapy. Peace begins with a smile. ☺😁
No comments:
Post a Comment