Monday, May 18, 2020

ವಿಧಿ ಲಿಖಿತ✒

📝

ವಿಧಿ ಲಿಖಿತ 
ಬಲು ಖಚಿತ 
ಬದಲಾವಣೆ ಅನಿಶ್ಚಿತ 
ಪಾಲಿಗೆ ಬಂದದ್ದು ಪಂಚಾಮೃತ✒ 

ಏನ ಬಯಸಿ ಬಂದೆ ನಾನು
ಏನ ಗಳಿಸಿ ಹೋಗುವೆ ನಾನು
ಹುಟ್ಟು ಸಾವಿನ ಮಧ್ಯೆ ಇನ್ನು
ಮೂರು ದಿನದ ಬಾಳು ಏನು?✒

ಮೂರು ದಿನದಿ ನೂರು ಕನಸು
ನೂರು ಕನಸಲ್ಲಿ ನನಸು ಎಷ್ಟೋ?
ಚಿಂತೆ-ಚಿತೆಯೂ ಸಮಾಸಮವು 
ಶೂನ್ಯವೊಂದೇ ವ್ಯತ್ಯಾಸವು✒

ಬದುಕಿನ ಪುಟದಲ್ಲಿ ಎಲ್ಲಾ ಗೋಳು
ಗೋಳು ಎನ್ನದೆ ಬದುಕಿ ಬಾಳು
ಬ್ರಹ್ಮ ಗೀಚಿದ ಬರಹವಿದು
ಯಾರಿಂದಲೂ ಅಳಿಸಲಾಗದು✒

ಕಾಲದ ಕರೆಗೆ ಓ ಎಂದಾಗ
ಎಲ್ಲಾ ತೊರೆದು ಸಾಗು ನೀನು
ಆತ್ಮ ಪರಮಾತ್ಮನ ಪಾಲು
ಕಾಯ ಮಣ್ಣಿನ ಪಾಲು✒

  
The purpose behind every birth, to whom we will meet, who will stay in our life and ups and downs of life till our death everything are pre decided by God before sending every creature to this earth. We have no control over these, just following his instructions. So only thing left to us is "accept the life as it is". Expectations will hurt more when it is not going according to our wish.✒☺






No comments: