Wednesday, May 20, 2020

🌹ನಿಮಗಿದೋ ನಮ್ಮ ಕೋಟಿ ನಮನ🌹

ಕಾರ್ಗತ್ತಲು ಕವಿದಿದೆ ಮನವ 
ಮಹಮಾರಿಯು ಮುತ್ತಿದೆ ಜಗವ
ಕ್ಷಣ ಕ್ಷಣಕ್ಕೂ ಭಯದ ನೆರಳು 
ಜನ ಮನದಲ್ಲಿ ಕಳವಳ ತರಲು😷

ದುಡಿಯುವ ಕೈಗಳಿಗಿಂದು 
ವೈರಸ್ ಹಾಕಿದೆ ಬೇಡಿ
ಆರ್ಥಿಕತೆಯ ಬುನಾದಿಯಿಂದು 
ಬುಡಮೇಲಾಗಿದೆ ನೋಡಿ😷

ಮನುಜನ ಕ್ರೌರ್ಯದ ಪಾಪ
ಸೃಷ್ಟಿಸಿದೆ ಮೃತ್ಯುವಿನ ಕೂಪ
ಪ್ರಕೃತಿ ನೀಡಿದ ಶಾಪ
ಸಹಿಸಲಾಗದೀ ವಿಕೋಪ😷

ದೇಹವೇ ದೇಗುಲವೆಂಬ
ಬಸವಣ್ಣನ ಮಾತು ಸತ್ಯ
ಆಡಂಬರವೇ ಜೀವನವೆಂಬ
ಗತ ಕಾಲ ಇಂದು ಮಿಥ್ಯ😷

ಕಾಂಚಾಣದ ಅಮಲಿನಿಂದ
ಸರಳ ಜೀವನದೆಡೆ ನಮ್ಮ ಪಯಣ
ಆಧುನಿಕತೆಯ ಮಂಪರಿನಿಂದ 
ಮಾನವೀಯತೆಯೆಡೆಗೆ ನಮ್ಮ ಗಮನ😷

ಕೊರೋನ ರೋಗದ ನಿಗ್ರಹ 
ಮಾಸ್ಕ್-ಸಾಮಾಜಿಕ ಅಂತರವೇ ಮದ್ದು
ನಮ್ಮ ರಕ್ಷಣ ತಾಣವೇ ಸ್ವಗೃಹ 
ಗುಂಪುಗಾರಿಕೆಗೆ ಸ್ವಯಂ ಹೇಳಿ ರದ್ದು😷

ಸ್ವಾರ್ಥ ತುಂಬಿದ ಜನರ ನಡುವೆ 
ನಿಸ್ವಾರ್ಥದ ಮನಗಳು ಹಲವು
ಜೀವದ ಹಂಗನು ತೊರೆಯೆ 
ನಿಮ್ಮ ಸೇವೆಗೆ ನಾವು ಶರಣು🙏

ಹಗಳಿರುಳೆನ್ನದ ಕಾಯಕದಿಂದ
ಬೆಳಗಿದೆ ಜನರ ಜೀವ - ಜೀವನ
ನಮ್ಮೆಲ್ಲರ ಹೃದಯಾಳದಿಂದ
ನಿಮಗಿದೋ ನಮ್ಮ ಕೋಟಿ ನಮನ🙏👏

ಸಂಘಜೀವಿಗಳಾದ ಮನುಜ ಕುಲಕ್ಕೆ ಬಂದೊದಗಿದ ಸಂಕಷ್ಟವನ್ನು ಎದುರಿಸುವುದು ಕಷ್ಟವಾದರೂ ಅನಿವಾರ್ಯ. ನಮ್ಮಿಂದಾಗುವ ಕನಿಷ್ಟ ಸಹಾಯವೆಂದರೆ ಸ್ವಯಂ ಜಾಗೃತಿಗೊಂಡು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಅದುವೇ ನಮಗಾಗಿ ಶ್ರಮಿಸುವ ವರ್ಗಕ್ಕೆ ನಾವು ಮಾಡುವ ಅರ್ಥಗರ್ಭಿತವಾದ ಅಭಿನಂದನೆ. ಬರಹದ ಮೂಲಕ ಜನ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನವಿದು. 


  1. " To protect our wealth we will take different precautionary measures. Even for a single rupee loss we will bother a lot. But health is the real wealth. Why we can't wear atleast a mask and maintain social distance untill the deadly virus is completely eradicated? Please think of it"😷







No comments: