Thursday, July 30, 2020

ಅಮೃತ ಸಿಂಚನ - ಅಧ್ಯಾಯ 3

ವ್ಯಕ್ತಿಯನ್ನು ಯಶಸ್ಸಿನ ಶಿಖರಕ್ಕೇರಿಸುವ,
ಅಥವಾ ನೋವಿನ ಪಾತಾಳಕ್ಕೆ ನೂಕುವ
ಎರಡೂ ಸಾಮರ್ಥ್ಯ ಸ್ನೇಹಕ್ಕಿದೆ
ಸ್ನೇಹ ಸಂಬಂಧವನ್ನು ಚಿರಕಾಲ ಉಳಿಸುವ
ಜವಾಬ್ದಾರಿ ನಮ್ಮ ಕೈಯಲ್ಲಿದೆ
ಸ್ನೇಹದ ಪರಿಚಯ ಸಮಯಾಧಾರಿತವಾದರೆ
ಸ್ನೇಹ ಸಂಬಂಧದ ನಿಶ್ಚಲತೆ ಗುಣಾಧಾರಿತವಾಗಿದೆ
ಹೃದಯ ಸೌಂದರ್ಯದ ತಳಹದಿಯ ಮೇಲೆ
ರಕ್ತ ಸಂಬಂಧ ಮೀರಿ ಬೆಳೆಯುವ
ಪವಿತ್ರ ಬೆಸುಗೆಯಿದು ಸ್ನೇಹ
ಸಂಕಷ್ಟದಲ್ಲಿ ಹೆಗಲು ನೀಡುವ
ದುಃಖದಲ್ಲಿ ಕಂಬನಿ ಒರೆಸುವ
ನಮ್ಮ ನಗುವಿನೊಳಗೆ ಮುಗುಳ್ನಗುವ
ಅವಿನಾಭಾವ ಸಂಬಂಧದ ಹೆಸರೇ ಸ್ನೇಹ
                                      - ಒಂದೊಳ್ಳೆ ಮಾತು




Wednesday, July 29, 2020

ಅಮೃತ ಸಿಂಚನ - ಅಧ್ಯಾಯ 2

ಕಷ್ಟ ಕಾಲದಲ್ಲಿ ನಮ್ಮನ್ನು
ಯಾರಾದರೂ ನೆನೆಯುತ್ತಾರೆ ಎಂದರೆ
ಅವರ ದೃಷ್ಟಿಯಲ್ಲಿ ನಾವು
ಭರವಸೆಯ ಅಂತಿಮ ಬೆಳಕು
ಸಂಕಷ್ಟದಲ್ಲಿ ನೊಂದ ಮನಸ್ಸಿನೊಂದಿಗೆ
ನಾವು ಸ್ಪಂದಿಸುತ್ತೇವೆಯೆಂದರೆ
ನಮ್ಮನ್ನು ನಾವೇ ಸುಟ್ಟುಕೊಂಡು
ನಿಸ್ವಾರ್ಥದಿಂದ ಬೆಳಗುವ ಹಣತೆ
ಮತ್ತೊಬ್ಬರ ಪಾಲಿಗೆ ಬೆಳಕಾಗುವ
ಅವಕಾಶ ಎಲ್ಲರಿಗೂ ದೊರೆಯದು
                         - ಒಂದೊಳ್ಳೆ ಮಾತು



Sunday, July 26, 2020

ಭಾವನಾಲೋಕ

ಭಾವನಾಲೋಕದಲ್ಲಿ
ಮಾತಿಂದು ಗೌನ
ಮನಸ್ಸಿನಾಳದಲ್ಲಿ
ಆವರಿಸಿದೆ ಮೌನ

ಕಲ್ಪನಾಲೋಕದಲ್ಲಿ
ಮೂಡಿರುವ ಬಿಂಬ
ಮರೆಯಾದೆ ವಾಸ್ತವದಲ್ಲಿ
ನಾನಾದೆ ಕಲ್ಪನೆಯ ಪ್ರತಿಬಿಂಬ

ಸುಪ್ತ ಮನಸ್ಸಿನಲ್ಲಿ
ನಿನ್ನದೇ ಮೊಹರು
ಸೊಗಸಾದ ಕನಸಿನಲ್ಲಿ
ನೀ ಸುಳಿದ ಕುರುಹು

ಕವಿ ಕಲ್ಪನೆ ಮೀರಿದ
ಕಾವ್ಯ ನೀನು
ರವಿ ಕಲ್ಪನೆ ಮೀರಿದ
ಸೃಷ್ಟಿ ನೀನು

- ಬರಹಗಾರರ ಕಾಲ್ಪನಿಕ ಸಾಲುಗಳು ಮಾತ್ರ

ಜೀವ ಮಿಡಿಯುತಿದೆ....

ಕಣ್ಣ ನೋಟದಲ್ಲೇ
ನನ್ನ ಸೆಳೆದ ಕಣ್ಣು
ಮೌನ ಗೀತೆಯಲ್ಲೇ
ನನ್ನ ಕರೆದ ಹೆಣ್ಣು
ಕನಸಿನೊಳಗೆ ಅವಳ ಹೆಜ್ಜೆ
ಮನಸಿನೊಳಗೆ ಏನೋ ಲಜ್ಜೆ
ಜೀವ ಮಿಡಿಯುತಿದೆ..........

ಜನುಮ ಜನುಮದಲ್ಲಿ
ನನ್ನ ಜೀವ ನೀನು
ನಿನ್ನೆಲ್ಲಾ ನೋವಿನಲ್ಲಿ 
ಪಾಲುದಾರ ನಾನು
ಪ್ರೀತಿ ಹೃದಯ ಬಳಿಗೆ ಬರಲು
ಭಾವನೆಗಳ ಹೊತ್ತು ತರಲು
ಜೀವಮಿಡಿಯುತಿದೆ...........

 - ಬರಹಗಾರರ ಕಾಲ್ಪನಿಕ ಸಾಲುಗಳು ಮಾತ್ರ

ಮನ್ವಂತರ

ಕನಸಿನ ಕಣ್ಣಿಗೆ
ಪ್ರೇಮದ ಕಾಡಿಗೆ
ಹೃದಯದ ಭೇಟಿಗೆ
ನಂಬಿಕೆಯೇ ದೀವಿಗೆ

ಸ್ವಾರ್ಥ ಭಾವ ದಾಟಿ
ಮನಸ್ಸು-ಮನಸ ಭೇಟಿ
ಮನ್ವಂತರ ಮೀಟಿ
ನಿಷ್ಕಲ್ಮಶ ಭಾವ ಪ್ರೀತಿ

- ಬರಹಗಾರರ ಕಾಲ್ಪನಿಕ ಸಾಲುಗಳು


Saturday, July 25, 2020

ಸ್ನೇಹ

💖ಸ್ನೇಹವೆಂಬ ಭಾವವು
 ಮನದಂಗಳದಿ ಅರಳಲು
 ಒಬ್ಬಂಟಿಯ ನೋವು
ಮಂಜಿನ ಹನಿಯಂತೆ ಕರಗಲು

 ಕೋಪದೊಳಗಿನ ಪ್ರೀತಿಯ ಆಳ
 ನಗುವಿನೊಳಗಿನ ನೋವಿನ ಕಡಲ
 ಮೌನದೊಳಗಿನ ಮಾತಿನ ಹೊನಲ
 ಅರಿಯುವ ಶಕ್ತಿ ನೀ ಸ್ನೇಹ

 ರಕ್ತ ಸಂಬಂಧವ ಮೀರಿದುದು
 ನಿಸ್ವಾರ್ಥ ಭಾವದ ಕಡಲಿದು 
ಸಾಂತ್ವನದ ಚಿಲುಮೆಯಿದು
 ಅತ್ಯಮೂಲ್ಯ ಸಂಪತ್ತಿದುವೇ ಸ್ನೇಹ

 ಮೇಲು ಕೀಳೆಂಬ ಭಾವವಿರದು
 ಗಂಡು ಹೆಣ್ಣೆಂಬ ಭೇದವಿರದು
 ವಯಸ್ಸಿನ ಅಂತರವಿರದು
ಎಲ್ಲರನ್ನೂ ಆದರಿಸುವುದೀ ಸ್ನೇಹ💛

 Real Friendship is the one which always supports you in your ups and downs of your life. We can analyze the strength of any relationship, how it will support when we are really struggling to get rid of our problems. Friend in need is a friend indeed👭