Sunday, August 30, 2020

ಅಮೃತ ಸಿಂಚನ - ಅಧ್ಯಾಯ 14

 ಗೆಲುವು ಆತ್ಮ ಸಂತೃಪ್ತಿ ಹುಟ್ಟಿಸಬೇಕೇ

ಹೊರತು ಅಹಂಕಾರವನ್ನಲ್ಲ.

ಸೋಲು ಆತ್ಮ ಸ್ಥೈರ್ಯ ಹೆಚ್ಚಿಸಬೇಕೇ 

ಹೊರತು ನಕಾರಾತ್ಮಕ ಯೋಚನೆಗಳನ್ನಲ್ಲ.

ಅಮೃತ ಸಿಂಚನ - ಅಧ್ಯಾಯ 13

 ನಮ್ಮ ಬದುಕಲ್ಲಿ ಪ್ರವೇಶ ಬಯಸುವ

ಪ್ರತಿಯೊಂದು ವಸ್ತು ಅಥವಾ ವ್ಯಕ್ತಿಯನ್ನು

ಕಾಲವೇ ನಿರ್ಧರಿಸುವುದು.

ಆದರೆ ಮನಸ್ಸಿಗೆ ಎಷ್ಟು ಹಿತವರೆಂಬುದನ್ನು

ಗುಣ ಮತ್ತು ಸ್ವಭಾವ ನಿರ್ಧರಿಸುವುದು



ಅಮೃತ ಸಿಂಚನ - ಅಧ್ಯಾಯ 12

 ಮನುಷ್ಯರಲ್ಲದೆ ಪ್ರತಿಯೊಂದು ಪ್ರಾಣಿ ಪಕ್ಷಿಗಳಲ್ಲೂ

ಭಾವನೆಗಳಿಗೆ ಸ್ಪಂದಿಸುವ ಮುಗ್ಧ ಮನಸ್ಸಿದೆ.

ಪ್ರೀತಿಯ ಪರಿಭಾಷೆಗೆ ಪ್ರತಿಕ್ರಿಯೆ ನೀಡದ 

ಆತ್ಮವಿಲ್ಲ ಜಗದಲ್ಲಿ.

ಅರ್ಥ ಮಾಡಿಕೊಳ್ಳುವ ಮನಸ್ಸು ಮತ್ತು ತಾಳ್ಮೆ

ಇರಬೇಕಷ್ಟೆ.




Saturday, August 1, 2020

ಅಮೃತ ಸಿಂಚನ - ಅಧ್ಯಾಯ 11

ನಮ್ಮ ಮುಂದಿನ ಪೀಳಿಗೆಗೆ
ಹಣ ಆಸ್ತಿ ಕೂಡಿಟ್ಟರೆ
ಭವಿಷ್ಯದಲ್ಲಿ ಸುಖ ಜೀವನ ನಿಖರವಲ್ಲ
ಅದೇ ಶ್ರಮದಿ ದುಡಿಯುವ
ಸಂಸ್ಕಾರ ನೀಡಿದರೆ
ನಮ್ಮ ಅಗಳಿಕೆಯ ನಂತರವೂ
ನೆಮ್ಮದಿಯಿಂದಿರುವುದು ಖಂಡಿತ
ಏಕೆಂದರೆ ಕೂತು ಉಂಡರೆ
ಕುಡಿಕೆ ಹೊಣ್ಣು ಸಾಲದು
                 - ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 10

ಪ್ರೀತಿಯ ನಿಜವಾದ ಅರ್ಥ
ಪ್ರೀತಿಯನ್ನು ಗಳಿಸುವುದಲ್ಲಾ
ಪ್ರೀತಿಯನ್ನು ಹಂಚುವುದು
ಇಲ್ಲಿ ಅನುಮಾನಕ್ಕೆ, ಅಧಿಕಾರಕ್ಕೆ ಜಾಗವಿಲ್ಲ
ವಿಶ್ವಾಸ ಮತ್ತು ನಂಬಿಕೆಯ
ಭದ್ರ ಬುನಾದಿ.............
                        -  ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 9

ಸಿರಿ ಬಡವನಾದರೂ
ನಾ ನಿನ್ನ ಸ್ವೀಕರಿಸುವೆನು
ಗುಣವೇ ಸಿರಿತನವಯ್ಯ
ಗುಣ ಬಡವನಾದರೆ
ನಾ ಹೇಗೆ ಸ್ವೀಕರಿಸಲಿ
ಆತ್ಮ ಸೌಂದರ್ಯವೇ ಶಾಶ್ವತವಯ್ಯ
                        - ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 8

ಶ್ರಮದಿ ಮೇಲೇರುತ್ತಿರುವವರನ್ನು
ಕೆಳೆಗೆಳೆಯುವ ಪ್ರಯತ್ನ
ಸಾಮಾನ್ಯವಾಗಿ ಯಾರೂ ಮಾಡಬಹುದು
ಅದೇ ತಾನೂ ಶ್ರಮದಿ ಮೇಲೇರಿ
ಮತ್ತೊಬ್ಬರನ್ನು ಮೇಲೆತ್ತುವ ಅದ್ಭುತ ಕೆಲಸ
ಕೇವಲ ಸ್ವಚ್ಛ ಮನಸ್ಸಿನಿಂದ ಸಾಧ್ಯ
ಇಂಥ ಅಸಾಮಾನ್ಯ ಕೆಲಸ ಒಮ್ಮೆ ಮಾಡಿ
ಆತ್ಮ ಸಂತೃಪ್ತಿ ದೊರಕುವುದು
                      - ಒಂದೊಳ್ಳೆ  ಮಾತು
                          

ಅಮೃತ ಸಿಂಚನ - ಅಧ್ಯಾಯ 7

ಸಾವನ್ನು ಗೆದ್ದವರು
ಮೃತ್ಯುಂಜಯರಾದರೆ
ಮನಸ್ಸುಗಳನ್ನು ಗೆಲ್ಲುವವರು
ಸಾವಿನ ನಂತರವೂ ಅಜಾರಾಮರ
ಇತರರನ್ನು ಬಲದಿಂದ ಗೆಲ್ಲುವವರು
ಶಕ್ತಿ ಶಾಲಿಯಾದರೆ
ಎಲ್ಲರನ್ನು ಪ್ರೀತಿ-ವಿಶ್ವಾಸದಿಂದ ಗೆಲ್ಲುವವರೇ
ಸರ್ವ ಶಕ್ತರು
                         - ಒಂದೊಳ್ಳೆ ಮಾತು

ಅಮೃತ ಸಿಂಚನ- ಅಧ್ಯಾಯ 6

ಭುವಿಯನ್ನೇ ಸೃಷ್ಟಿಸಿರುವ ಭಗವಂತನಿಗೆ
ನಾನೇನನ್ನು ನೀಡಿ ಸಂತೃಪ್ತಿಗೊಳಿಸಲು ಸಾಧ್ಯ?
ಎಲ್ಲಾ ಸಂಪತ್ತನ್ನು ಆತನೇ ಭಿಕ್ಷೆ ನೀಡಿರುವಾಗ
ನನ್ನಿಂದ ಏನಾದರೂ ಬಯಸಲು ಹೇಗೆ ಸಾಧ್ಯ?
ಆತ ಬಯಸುವುದೊಂದೇ ನಿಷ್ಕಲ್ಮಶ ಭಕ್ತಿ
ಎಲ್ಲರ ಹೃದಯದಲ್ಲೂ ದೇವರಿದ್ದಾರೆ
ನೊಂದ ಹೃದಯಗಳಿಗೆ ಸ್ಪಂದಿಸುವುದೇ
ಭಕ್ತಿ ಮತ್ತು ಪ್ರೀತಿಯ ಮೊದಲ ಹೆಜ್ಜೆ
ದೇಹವೇ ದೇಗುಲ
                         - ಒಂದೊಳ್ಳೆ ಮಾತು


ಅಮೃತ ಸಿಂಚನ - ಅಧ್ಯಾಯ 5

ಸತತವಾಗಿ ಉಳಿ ಏಟು ತಿಂದ ಮೇಲೆ
ಶಿಲೆಯು ಪರಂಪವಿತ್ರ ಮೂರ್ತಿಯಾಗಿ
ಗರ್ಭಗುಡಿಯನ್ನಲಂಕರಿಸುವುದು
ಉಷ್ಣತೆಯ ಕುಲುಮೆಯಲ್ಲಿ ಬೆಂದ ಮೇಲೆಯೇ
ಚಿನ್ನದ ಅದಿರು ಅಪ್ಪಟ ಬಂಗಾರವಾಗುವುದು
ಹಾಗೆಯೇ ವಿಧಿಯ ನೋವಿನ ಕುಲುಮೆಯಲ್ಲಿ
ಬೆಂದ ಆತ್ಮವು ಮಾತ್ರ ಮಾನವೀಯತೆಯ ಮೂರ್ತಿಯಾಗಿ
ಎಲ್ಲರನ್ನೂ ಆದರಿಸುವ ಪರಮಾತ್ಮವಾಗುವುದು
                                               - ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 1

ಧಾನ್ಯದ ಬೀಜ ಬಿತ್ತಿದರೆ
ಮೂರು ವರುಷದ ಫಲ 
ಹಣ್ಣಿನ ಬೀಜ ಬಿತ್ತಿದರೆ 
ನೂರು ವರುಷದ ಫಲ
ವಿದ್ಯೆಯ ಬೀಜ ಬಿತ್ತಿದರೆ 
ಸಾವಿರಾರು ವರುಷದ ಫಲ
ಜ್ಞಾನ ಯಾರೂ ಕದಿಯಲಾರದ
ಸಂಪತ್ತಿನ ಕಣಜ
           - ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 4

ಸಾಧಕರಿಗೆ ಯಶಸ್ಸು
ಎಂದಿಗೂ ಅಂತಿಮವಲ್ಲ
ಸೋಲು ಎಂದಿಗೂ ಕೊನೆಯಲ್ಲ
ಸೋಲಿನ ಏಟಿಗೆ ಸೋತರೆ
ಯಶಸ್ಸು ಕೇವಲ ಕನಸಷ್ಟೆ
ಎಲ್ಲಾ ಸಾಧಕರ ಯಶಸ್ಸಿನ ಹಿಂದೆ
ಸೋಲಿನ- ನೋವಿನ ಸರಮಾಲೆಗಳಿವೆ
ಸತತ ಪ್ರಯತ್ನವೇ
ಗೆಲುವಿನ ಹೆಬ್ಬಾಗಿಲಿನ ಕೀಲಿಗೈ
                         - ಒಂದೊಳ್ಳೆ ಮಾತು